Sunday, 24 January 2016
26 Jan tweet campaign
Tweets in Kannada language to be used for 26 Jan tweet campaign, you can add your own in the comments below...
Tweets in Kannada
೧. ಭಾರತೀಯ ಪ್ರಜೆಗಳೆಲ್ಲರೂ ಸಮಾನರು ಎನ್ನುವುದಾದರೆ, ಭಾಷೆಗಳೇಕೆ ಸಮಾನವನಲ್ಲ? ಭಾಷಾ ಸಮಾನತೆಯನ್ನು ಬೆಂಬಲಿಸಿ. #NotHindiRepublic
೨. ಭಾರತದ ಸಂವಿಧಾನ ೮ನೆ ಶೆಡ್ಯೂಲ್ ಪ್ರಕಾರ, ಭಾರತದಲ್ಲಿ ಒಟ್ಟು ೨೨ ಭಾಷೆಗಳಿವೆ. ಆದರೆ, ಕೇವಲ ಒಂದು ಭಾರತೀಯ ಭಾಷೆ ಮಾತ್ರ ಅಧಿಕೃತ, ಯಾಕೆ? #NotHindiRepublic
೩. ಈಗಿರುವ ಅಧಿಕೃತ ಭಾಷೆ ಕಾಯಿದೆಯನ್ನು ತಿದ್ದುಪಡಿ ಮಾಡಬೇಕೆಂದು ನಾನು ಒಕ್ಕೂಟ ಸರ್ಕಾರವನ್ನು ಆಗ್ರಹಿಸುತ್ತೇನೆ. #NotHindiRepublic
೪. ಸಂವಿಧಾನದ ೮ನೆ ಶೆಡ್ಯೂಲ್‍ನಲ್ಲಿರುವ ಎಲ್ಲಾ ೨೨ ಭಾಷೆಗಳನ್ನೂ ಅಧಿಕೃತ ಭಾಷೆಗಳೆಂದು ಘೋಷಿಸಬೇಕು. #NotHindiRepublic
೫. ನನ್ನದೇನಿದೆ ಅದೆಲ್ಲವೂ ನನ್ನದು, ಜೊತೆಗೆ ನಿನ್ನದೂ ಸಹ ನನ್ನದೇ.. ಇದು ವಸಾಹಿತುಷಾಹಿ ಮನಸ್ಸು. #NotHindiRepublic
೬. ಯಾವುದೇ ಒಂದು ಭಾಷೆಯ ಆದಾರದ ಮೇಲೆ ಭಾರತ ಒಕ್ಕೂಟ ರಚನೆಯಾಗಿಲ್ಲ. #NotHindiRepublic
೭. ಭಾರತದ ರಾಜ್ಯಗಳು ಭಾಷಾ ಆಧಾರದ ಮೇಲೆ ರಚನೆಯಾಗಿದ್ದು. ಹಾಗಾಗಿ ಭಾಷೆಯ ಪ್ರಚಾರವನ್ನು ಆಯಾ ರಾಜ್ಯಗಳ ನಿರ್ಧಾರಕ್ಕೆ ಬಿಡಬೇಕು. #NotHindiRepublic
೮. ವೈವಿಧ್ಯತೆಯಲ್ಲಿ ಏಕತೆ ನಮ್ಮ ಶಕ್ತಿ. ದಯವಿಟ್ಟು ವೈವಿಧ್ಯತೆಯನ್ನು ಕೊಲ್ಲಬೇಡಿ. #NotHindiRepublic
೯. ಅನಗತ್ಯ ಹೇರಿಕೆಯು ನಾಳೆಯ ದಿನ ನಮ್ಮ ಏಕತೆಯನ್ನು ಕೊಲ್ಲುತ್ತದೆ. #NotHindiRepublic
೧೦. ಒಕ್ಕೂಟ ಸರ್ಕಾರವು ಹಿಂದಿಯೇತರ ರಾಜ್ಯದ ಪ್ರಜೆಗಳನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ಕಾಣುತ್ತಿದೆ. #NotHindiRepublic
೧೧. ನಮ್ಮನ್ನು ಒಂದುಗೂಡಿಸುವು ಒಂದು ಭಾಷೆಯ ಪ್ರಾಬಲ್ಯವಲ್ಲ, ಬದಲಾಗಿ ನಮ್ಮ ಸ್ವಾತಂತ್ರ್ಯ ಮತ್ತು ಸಮಾನತೆ ನಮ್ಮನ್ನು ಒಂದುಗೂಡಿಸುತ್ತದೆ. #NotHindiRepublic
೧೨. ಭಾರತವು ವೈವಿಧ್ಯಮಯ ರಾಷ್ಟ್ರ. ಈ ವೈವಿಧ್ಯತೆಯನ್ನು ಕೊಲ್ಲುವ ಮುಖಾಂತರ ಭಾರತವನ್ನು ಕೊಲ್ಲಬೇಡಿ. #NotHindiRepublic
೧೩. ಕರ್ನಾಟಕದ ಸಿ.ಬಿ.ಎಸ್.ಸಿ ಪಠ್ಯಕ್ರಮವಿರುವ ಶಾಲೆಗಳಲ್ಲಿ, ಹಿಂದಿ ಕಡ್ಡಾಯವಗಿದೆಯೇ ಹೊರತು ಕನ್ನಡವಲ್ಲ. #NotHindiRepublic
೧೪. ನನ್ನ ಭಾಷಾ ಸ್ವಾತಂತ್ರವನ್ನು ಗೌರವಿಸದಿದ್ದರೆ, ನಾನು ಹೇಗೆ ತಾನೇ ನನ್ನನ್ನು ಭಾರತೀಯನೆಂದು ಹೆಮ್ಮೆಯಿಂದ ಕರೆದುಕೊಳ್ಳಲಿ? #NotHindiRepublic
೧೫. ಒಕ್ಕೂಟ ಸರ್ಕಾರದ ಪ್ರತಿಯೊಂದು ಯೋಜನೆಗಳಿಗೂ ಹಿಂದಿಯ ಹೆಸರುಗಳೇಕೆ? #NotHindiRepublic
೧೬. ಹಿಂದಿಯೇತರ ರಾಜ್ಯಗಳ ಮೇಲಿನ ಅನಗತ್ಯ ಹಿಂದಿ ಹೇರಿಕೆಯು ಭಾಷಾ ಭಯೋತ್ಪಾದನೆ. #NotHindiRepublic
೧೭. ಹಿಂದಿಯೇತರ ರಾಜ್ಯಗಳಿಗೆ ಮಾತ್ರ ತ್ರಿ-ಭಾಷಾ ಸೂತ್ರ, ಆದರೆ ಅದೇ ಸೂತ್ರ ಹಿಂದಿ ಮಾತನಾಡುವ ರಾಜ್ಯಗಳಿಗೇಕಿಲ್ಲ? #NotHindiRepublic
೧೮. ಹಿಂದಿಯೇತರ ರಾಜ್ಯಗಳಲ್ಲಿ ಅನಗತ್ಯ ಹಿಂದಿಯೇರಿಕೆಯು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. #NotHindiRepublic
೧೯. ಕೇವಲ ಹಿಂದಿ ಮಾತ್ರವೇ ಅಧಿಕೃತ ಭಾಷೆಯೆಂದಾದರೆ, ಹಿಂದಿ ಮಾತನಾಡುವ ಪ್ರಜೆಗಳು ಮಾತ್ರ ಭಾರತದ ಅಧಿಕೃತ ಪ್ರಜೆಗಳೆಂದು ಯಾಕೆ ಘೋಷಿಸಬಾರದು? #NotHindiRepublic
೨೦. ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಸಂಚರಿಸುವ ರೈಲಿನ ಟಿಕೇಟ್‍ಗಳಲ್ಲಿ, ಕನ್ನಡವಾಗಲಿ, ತಮಿಳಾಗಲೀ ಇಲ್ಲ, ಬದಲಾಗಿ ಹಿಂದಿ ರಾರಾಜುಸುತ್ತಿದೆ. #NotHindiRepublic
ಸ್ವಾಭಿಮಾನ ಇದ್ದವರು ಶೇರ್ ಮಾಡಿ..
Subscribe to:
Post Comments (Atom)
No comments:
Post a Comment