Best Movie : Harivu
Best Actor : Sanchari Vijay (Naanu Avanalla Avalu)
Best Actress : Lakshmi Gopalswamy (Vidhaya)
First Directional Best Movie : Ulidavaru Kandanthe
2014-15 ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, ಹರಿವು ಪ್ರಥಮ ಅತ್ಯುತ್ತಮ ಚಿತ್ರವಾಗಿ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದರೆ, ಅಭಿಮನ್ಯು 2ನೇ ಅತ್ಯುತ್ತಮ ಚಿತ್ರ, ಹಗ್ಗದ ಕೊನೆ 3ನೇ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ಮಕ್ಕಳ ಚಿತ್ರ ಬಾನಾಡಿ.
ಶಿವರುದ್ರಯ್ಯ ನೇತೃತ್ವದಲ್ಲಿ ರಚಿಸಿದ್ದ ಸಮಿತಿ ಒಟ್ಟು 29 ವಿಭಾಗಗಳಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಾಡಿದ್ದು, ಶುಕ್ರವಾರ ವಾರ್ತಾ ಇಲಾಖೆ ಸಚಿವ ಆರ್. ರೋಷನ್ ಬೇಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಉಳಿದವರು ಕಂಡಂತೆ, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಗಜಕೇಸರಿ, ಅತ್ಯುತ್ತಮ ಪ್ರಾದೇಶಿಕ ಚಿತ್ರ ವಿಷದ ಮಳೆ. ನಾನು ಅವನಲ್ಲ ಅವಳು ಚಿತ್ರಕ್ಕೆ ಅತ್ಯುತ್ತಮ ಕಥೆ ಪ್ರಶಸ್ತಿ.
ನಾನು ಅವನಲ್ಲ ಅವಳು ಚಿತ್ರದ ನಟನೆಗಾಗಿ ಸಂಚಾರಿ ವಿಜಯ್ ಗೆ ಅತ್ಯುತ್ತಮ ನಟ ಪ್ರಶಸ್ತಿ, ಅತ್ಯುತ್ತಮ ನಟಿ ಲಕ್ಷ್ಮೀ ಗೋಪಾಲಸ್ವಾಮಿ (ವಿದಾಯ) ಬರಗೂರು ರಾಮಚಂದ್ರಪ್ಪಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಸಂತ್ ಕುಮಾರ್ ಪಾಟೀಲ್ ಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಸುರೇಶ್ ಅರಸ್ ಗೆ ವಿಷ್ಣುವರ್ಧನ್ ಪ್ರಶಸ್ತಿ (ಸಂಕಲನಕಾರ), ಅತ್ಯುತ್ತಮ ಪೋಷಕ ನಟಿ ಡಾ.ಬಿ.ಜಯಶ್ರೀ(ಕೌದಿ), ಅತ್ಯುತ್ತಮ ಕಥೆ ಲಿವಿಂಗ್ ಸ್ಮೈಲ್ ವಿದ್ಯಾ, ಅತ್ಯುತ್ತಮ ಚಿತ್ರಕಥೆ ಪಿ.ಶೇಷಾದ್ರಿ(ವಿದಾಯ), ಅತ್ಯುತ್ತಮ ಗೀತರಚನೆ ಹುಲಿಕುಂಟೆಮೂರ್ತಿ(ಕೌದಿ),




No comments:
Post a Comment